ಪೋಸ್ಟ್‌ಗಳು

ಬೆಂಗಳೂರಿನ ಬಸ್ಸಿನ ಪುರಾಣ

ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ ಬಸ್  ಪ್ರಯಾಣದಲ್ಲಿಯೇ ಕಳೆಯುತ್ತಾರೆ. ಯಾವಾಗಲೂ ಕಿಕ್ಕಿರಿದು ತುಂಬಿರುತ್ತದೆ. ಜನರ ಮದ್ಯೆ ನುಸುಳಲು ಗಾಳಿಗೂ ಸಹ ಹರಸಾಹಸ. ಗಾಳಿ  ಸೇವಿಸಲು ಹೇಗೋ ಕಷ್ಟ ಪಟ್ಟು ಜಗಳವಾಡಿ ಗುಂಪಿನಿಂದ ಮೂಗು ಆಚೆ ಹಾಕುತ್ತಾರೆ.  ಮದ್ಯಾಹ್ನದ ಸಮಯವಾದರೆ ಕಾಲೇಜು ಹುಡುಗ ಹುಡುಗಿಯರ ಗುಂಪು ಬಸ್ಸಿಗಾಗಿ ಕಾದಾಟ ನಡೆಸುತ್ತಿರುತ್ತಾರೆ. ಮೊದಲೇ ಪಾಠ ಕೇಳಿ ಸೋತು ಸುಣ್ಣವಾಗಿ ಹಸಿವಿನಿಂದ ಕಂಗಾಲಾಗುವ ಅವರನ್ನು ನೋಡಿದಾಗ ಬಸ್  ಕಂಡಕ್ಟರ್ ಡ್ರೈವರ್ ಗಳ ತಮಾಷೆ ಮೂಡ್ ಜೋರಾಗುತ್ತೆ. ಕಾಲೇಜು ಗುಂಪನ್ನು ಕಿಚಾಯಿಸಲು ಬೇಕೆಂದೇ ಬಸ್ಸನ್ನು ಅವರು ನಿಂತಿರುವ ಸ್ಥಳದಿಂದ (ಬಸ್ಸ ಸ್ಟಾಪ್ ಆದರೂ ) ಒಂದು ಫರ್ಲಾಂಗ್ ದೂರ ಹೋಗಿ ನಿಲ್ಲಿಸುತ್ತಾರೆ. ಹುಡುಗ ಹುಡುಗಿಯರು ಬಸ್ಸ ಹತ್ತಲು ಓಡತೊಡಗಿದರೆ ಕಂಡಕ್ಟರ್ ಡ್ರೈವರ್ ಕಿಟಕಿ ಬಾಗಿಲಿನಿಂದ ತಲೆ ಆಚೆ ಹಾಕಿ ಮುಗುಳ್ನಗೆ ಬೀರುತ್ತಾ ನೋಡುತ್ತಾರೆ ಹಸಿವಿನಲ್ಲೂ ಹುರುಪು ಉಳಿಸಿಕೊಂಡು ಜೋರಾಗಿ ಬಸ್ಸಿನೆಡೆಗೆ ಯಾರು ದೌಡಾಯಿಸುತ್ತಾರೆ ನೋಡಿ ಅವರಿಗೆ ಸನ್ಮಾನ ಮಾಡುವಂತೆ!!. ಮರುದಿನ ಕಾಲೇಜು ಗುಂಪು ಬಸ್  ಸ್ಟಾಪ್ಪ್ ನಲ್ಲಿ ನಿಲ್ಲದೆ ಮುಂದೆ ಹೋಗಿ ನಿಂತರೆ ಅಂದು ಬಸ್  ಸ್ಟಾಪ್ ನಲ್ಲೇ  ನಿಲ್ಲುತ್ತೆ ಕಾಲೇಜು ಗುಂಪನ್ನು ಹಿಂದೆ ಓಡಿ ಬಂದು ಬಸ್ಸ ಹತ್ತಲು ಪ್ರೇರೇಪಿಸುವಂತೆ 😡

ಗೃಹಿಣಿ

ಇಮೇಜ್
  ಮನೆಯೆಲ್ಲ ಅಸ್ತವ್ಯಸ್ತಗೊಂಡಿತ್ತು ಹಾಗೆಯೆ ಅವಳ ಮನಸ್ಸು ಸಹ. ಪತಿ ಮತ್ತು ಮಗಳ ಮೇಲಿನ ಸಿಟ್ಟು ಕ್ರಮೇಣ ಹತಾಶೆಯ ರೂಪ ಪಡೆದಿತ್ತು. ಮೋಡ ಕವಿದ ದಿಗಂತವನ್ನು ದಿಟ್ಟಿಸುತ್ತಾ ಯೋಚಿಸುತ್ತಿದ್ದಳು "ಯಾಕೆ ನಾನ್ ಹೇಳೋದೆಲ್ಲ ತಪ್ಪು ಅನ್ಸುತ್ತೆ ಇವ್ರಿಬ್ರಿಗೆ "... ? ಅವಳು ಮಿತಭಾಷಿಯಾದ್ರೂ ಪತಿ ಮತ್ತು ಮಗಳೊಡನೆ ಮಾತ್ರ ಹರಟೆ ಹೊಡೆಯುತ್ತಿದ್ದಳು. ಅವರೊಡನೆ ಮಾತ್ರ ತನ್ನನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಳು. ತುಂಬಾ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಓದಿದ್ದ ಅವಳಿಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲದೆ  ಗೃಹಿಣಿಯಾಗಿ ಮನೆಯನ್ನು ಅಚ್ಚುಕಟ್ಟುತನದಿಂದ ನಿಭಾಯಿಸುತ್ತಿದ್ದಳು. ಚತುರೆ ಚಾಣಾಕ್ಷೆ ಅಲ್ಲದಿದ್ದರೂ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಅವಳಲ್ಲಿತ್ತು. ಅದರಂತೆ ತನ್ನ ಅಭಿಪ್ರಾಯಗಳನ್ನು ಅವರಿಬ್ಬರಲ್ಲಿ ಹೇಳುತ್ತಿದ್ದಳು ಆದರೆ ಅವರು ಎಂದೂ ಒಪ್ಪುತ್ತಿರಲಿಲ್ಲ. ಇದು ಸಾಮಾನ್ಯವಾದರೂ ಇಂದು ಮಾತ್ರ ತುಸು ಹೆಚ್ಚೇ ಎನಿಸುವಷ್ಟು ಸಿಟ್ಟು ಹತಾಶೆ ಮನಸ್ಸಿನಿಂದಾಚೆ ಇಣುಕಿತ್ತು. ಅದರ ಪರಿಣಾಮ ಮನೆಯ ಮೇಲಾಗಿತ್ತು ಅಸ್ತವ್ಯಸ್ತವಾಗುವದರ ಮೂಲಕ.  ಸುಮಾರು ಹೊತ್ತಿನವರೆಗೂ ಹಾಗೆಯೆ ಕುಳಿತಿದ್ದಳು. ದಿಗಂತದಲ್ಲಿ ಮೋಡ ಕರಗಿ ಶುಭ್ರ ಆಕಾಶ ಹೊಳೆಯತೊಡಗಿತ್ತು ಸೂರ್ಯನಿಂದ ಬಳುವಳಿಯಾಗಿ ಪಡೆದ ಹೊಂಬಣ್ಣದೊಡನೆ, ಹಾಗೆಯೆ ಅವಳ ಮನಸ್ಸು ಸಹ. ಸಿಟ್ಟು ಹತಾಶೆ ಪೂರ್ತಿ ಕರಗಿ ಹೋಗಿತ್ತು. ತನ್ನ ಹುಚ್ಚುತನಕ್ಕೆ ತಾನೇ ನಕ್ಕು &qu

ಕಮಂಗಿ

 ಕೇರಳದ ಪುಟ್ಟ ಊರಿನಲ್ಲಿ ಒಂದು ಮಲಯಾಳಿ ಕುಟುಂಬ ಗಂಡ ಹೆಂಡತಿ ಮತ್ತು ಮಗಳು. ಮಗಳ ವಯಸ್ಸು ೨೦ -೨೫ ರ ಆಸುಪಾಸು ಆದರೂ ಪ್ರಭುದ್ದತೆ ಇಲ್ಲದೆ ಬುದ್ದಿ ಮಾತ್ರ ಕಮಂಗಿತನದಿಂದ ಕೂಡಿತ್ತು. ಕಮಂಗಿ ಎಂದರೆ ಹುಚ್ಚು ಹುಚ್ಚಾಗಿ ಆಡುವ, ಮಾತನಾಡುವ ಮನುಷ್ಯ ರೂಪದಲ್ಲಿರುವ ಮಂಗಾ. ಬುದ್ದಿಯಲ್ಲಿ ಅಪ್ಪ ಅಮ್ಮನಿಗೆ ತಕ್ಕ ಮಗಳು. ಅವರ ವಂಶ ವೃಕ್ಷವೇ ಹಾಗಿತ್ತು ವಂಶ ಮಾತ್ರ ಬೆಳೆದು ಬುದ್ದಿ ಬಾಡಿ ಹೋಗಿತ್ತು. ಗಾಂಭೀರ್ಯ ಎನ್ನುವ ಪದ ಅವರಿಂದ ಬಲು ದೂರದಲ್ಲಿತ್ತು. ಯಾವುದಾದರೊಂದು ವಿಷಯದಲ್ಲಿ ನೆರೆ ಹೊರೆಯವರೊಡನೆ ಚರ್ಚೆ ಸಾಮಾನ್ಯವಾಗಿತ್ತು. ಹೀಗಿರಲು ಅಲ್ಲಿ ಬೇರೆ ಭಾಷೆಯ ಕುಟುಂಬ ನೆಲೆಸಲು ಬಂದಿತ್ತು. ಆ ಕಮಂಗಿಯ ಕುಟುಂಬಕ್ಕೆ ಆ ಭಾಷೆ ಹೊಸದು. ಹೊಸ ಕುಟುಂಬ ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರ  ಸೌಂದರ್ಯವನ್ನು  ಹೊಗಳಿ ಮಾತನಾಡುತ್ತ ಅಂಗಳದಲ್ಲಿ ನಿಂತಿದ್ದರು. ಕಾರಣವಿಲ್ಲದೆ ಎಲ್ಲರೊಡನೆ ಜಗಳವಾಡುವ ಕಮಂಗಿಗೆ ಅವರ ಮಾತು ಅರ್ಥವಾಗದೇ ತನ್ನನ್ನು ತನ್ನ  ಅಮ್ಮ ಅಪ್ಪನನ್ನು ಬೈಯ್ಯುತ್ತಿದ್ದಾರೆಂದು ಹೊಸ ಕುಟುಂಬದೊಡನೆ ಜಗಳವಾಡತೊಡಗಿದಳು ತನ್ನ ಅಮ್ಮ ನೊಡನೆ ಸೇರಿ. ಪರಿಚಯವೇ ಆಗದ ಹೊಸ ಕುಟುಂಬ ತಮಗೇಕೆ ಬೈಯ್ಯುತ್ತಾರೆಂಬ ಸಾಮಾನ್ಯ ಜ್ಞಾನವಿಲ್ಲದೆ ಪೆದ್ದುತನ ಪ್ರದರ್ಶಿಸಿದ್ದರು ಅಮ್ಮ ಮಗಳು.  ಆ ಕುಟುಂಬದ ಭಾಷೆ ಅರಿತ ಕೆಲ ಜನರು ಕಮಂಗಿಯ ಹುಚ್ಚುತನಕ್ಕೆ ನಗತೊಡಗಿದರು. ಮತ್ತು ವಿವರಿಸಿ ಮಾತಿನ ಅರ್ಥ ಹೇಳಿದರು. ಆಗ ಕಮಂಗಿಯ ಮುಖ "ಇಂಗು ತಿಂದ ಮಂಗನಂ

ಮಲೇಶಿಯಾದ ಮರೆಯಲಾಗದ ಸವಿನೆನಪುಗಳು

 ನನ್ನ ಪತಿ ಮಲೇಷ್ಯಾದಲ್ಲಿ ೫ ವರ್ಷದ ಕಾಂಟ್ರಾಕ್ಟ್ ಕೆಲಸದಲ್ಲಿದ್ದರು.  ಕುಟುಂಬಕ್ಕೂ ಅಲ್ಲಿ ಇರಲು ಎಲ್ಲ ರೀತಿಯ ಸೌಲಭ್ಯಗಳನ್ನು ಕಂಪನಿಯು ಒದಗಿಸಿತ್ತು. ಹೀಗಾಗಿ ಪತಿ ನನ್ನನ್ನು, ಅತ್ತೆಯನ್ನು ಮತ್ತು ಮಗಳನ್ನು ಅಲ್ಲಿಗೆ ನೆಲೆಸಲು ಕರೆದೊಯ್ದರು. ಮಲೇಷ್ಯಾ ತುಂಬಾ ಸುಂದರವಾದ, ಹೆಚ್ಚು ಜನಜಂಗುಳಿ ಇರದ ಕರಾವಳಿ ದೇಶ. ಅಲ್ಲಿ ಭಾರತ,ಇಂಡೋನೇಷಿಯಾ,ಚೀನಾ,ಬಾಂಗ್ಲಾ,ಥಾಯ್ಲ್ಯಾಂಡ್ ಹೀಗೆ ವಿವಿಧ ದೇಶದ ಜನರಿದ್ದಾರೆ. ಮಲೇಷ್ಯಾದ ಮೂಲನಿವಾಸಿಗಳಿಗೆ ಮಲೆಯು ಜನರು (ಮುಸ್ಲಿಂ ಜನಾಂಗ) ಎನ್ನುತ್ತಾರೆ. ಅವರಿಗೆ ಬಾಲಿವುಡ್ ಸಿನಿಮಾಗಳು ತುಂಬಾ ಇಷ್ಟ. ಹಿಂದಿ ಹಾಡುಗಳು ಅವರಿಗೆ ಆಪ್ತ ಅದರ ಜೊತೆಗೆ ತಮಿಳ್ ಸಿನಿಮಾಗಳು ತಮ್ಮ ವರ್ಚಸ್ಸನ್ನು ಬೀರಿವೆ. ಮಲೇಷ್ಯಾದ ನೆಲದ ಮೇಲೆ ಕಾಲಿಟ್ಟ ತಕ್ಷಣ ಆತ್ಮೀಯವೆನಿಸಿಬಿಡುತ್ತದೆ ಆ ದೇಶ. ಅಲ್ಲಿಯ ಸ್ಥಳಿಯ ಹಾಗೂ ವ್ಯಾವಹಾರಿಕ ಭಾಷೆ "ಮಲಯ್ ಅಥವಾ ಮಲ್ಹಾಯು ". ಈ ಭಾಷೆಗೆ ಸ್ವಂತ ಲಿಪಿ ಇಲ್ಲ ಇಂಗ್ಲಿಷ್ ಲಿಪಿ ಉಪಯೋಗಿಸಿ ಬರೆಯುತ್ತಾರೆ. ಕೆಲ ಅಕ್ಷರಗಳ ಉಚ್ಛಾರ ಬೇರೆ ತೆರನಾಗಿದೆ. ಆದ್ದರಿಂದ ಇಂಗ್ಲಿಷ್ನಲ್ಲಿ ಬರೆದ್ರೂ ಉಚ್ಛಾರ ಮತ್ತು ಅರ್ಥ ಗೊತ್ತಾಗಲ್ಲ. ಹೀಗಿರುವಾಗ ನಾವೆಲ್ಲರೂ ಶಾಪಿಂಗ್ ಹೊರಟೆವು.ತುಂಬಾ ಸುಸಜ್ಜಿತವಾದ  ಮಾಲ್ ಗಳು ಅಂಗಡಿಗಳು ಇದ್ದವು. ಪ್ರತಿ ಮಾಲ್ ನಲ್ಲಿಯೂ ನಮಾಜ್ ಗಾಗಿ ಹೆಂಗಸರು ಮತ್ತು ಗಂಡಸರಿಗೆ ಪ್ರತ್ಯೇಕ ಪ್ರೇಯರ್ ರೂಮ್  ಕಡ್ಡಾಯವಾಗಿರುತ್ತದೆ. ರೆಸ್ಟ್ ರೂಮ್ ಗಳು ಅಲ್ಲಲ್ಲಿ ಇರ

ಕಲ್ಪನ

ಇಮೇಜ್
ನಾನು ನನ್ನ ಮಗಳು ಹೊರಗೆ ಹೊರಡುವದು ಕಡಿಮೆ. ನಮಗೆ ಮನೆಯೇ ಪ್ರಪಂಚ. ಅದರಲ್ಲೂ ನಾನು ಹೆಸರಿಗೆ ತಕ್ಕಂತೆ ಭಾವನಾಜೀವಿ . ಅನಿವಾರ್ಯವಿದ್ದರೆ ಮಾತ್ರ ಹೊರಡುವದು ಅದೂ ಒಲ್ಲದ ಮನಸ್ಸಿನಿಂದ. ಹೀಗೆ ಒಂದು ದಿನ ಮನೆಗೆ ಬೇಕಾದ ಕೆಲವು ಸಾಮಾನುಗಳ ಖರೀದಿಗೆಂದು ನಾನು ನನ್ನ ಪತಿ ಹೊರಟೆವು ಮಗಳು ನಮ್ಮ ಜೊತೆಗೂಡಿದಳು ಅವಳಿಗೂ ಕೆಲವು ಶಾಪಿಂಗ್ ಮಾಡಬೇಕಿತ್ತು, ಇಲ್ಲದಿದ್ದರೆ ಜಪ್ಪಯ್ಯ ಎಂದರೂ ಅವಳು ಹೊರಡುವದಿಲ್ಲ!.. ಮನೆಯ ಸಾಮಾನುಗಳ ಖರೀದಿ ಮುಗಿಸಿ ಮಗಳ ಸಾಮಗ್ರಿಗಳ ಖರೀದಿಗೆ ಕಾರು ಹತ್ತಿದೆವು. ಸ್ವಲ್ಪ ಮುಂದೆ ಹೋದ ಮೇಲೆ ಪತಿ ಕಾರನ್ನು ಒಂದು ಕಡೆ ನಿಲ್ಲಿಸಿ ಮಗಳನ್ನು ಕರೆದುಕೊಂಡು  ಹೊರಟರು.  ಶಾಪಿಂಗನಲ್ಲಿ ನನ್ನ ಉಪಸ್ಥಿತಿಯ ಪ್ರಾಮುಖ್ಯತೆ ಇಲ್ಲದ್ದರಿಂದ ನಾನು ಕಾರಿನಲ್ಲಿಯೇ ಕುಳಿತಿರುತ್ತೇನೆಂದೆ.     ಕಾರು ನಿಲ್ಲಿಸಿದ್ದ ಜಾಗದಿಂದ ಕಾಲ್ನಡಿಗೆ ಅಂತರದಲ್ಲಿ ಕಾಲು ಎಕರೆಗೂ ಕಡಿಮೆ ಜಾಗದಲ್ಲಿ ತುಂಬಾ ಮರಗಳು ಬೆಳೆದಿದ್ದವು. ಅದು ಕಾಡಲ್ಲದಿದ್ದರೂ ತುಸು ಹೆಚ್ಚೇ ಎನ್ನುವಷ್ಟು ಮರಗಳ ಒಕ್ಕೂಟವಿತ್ತು. ಸಂಜೆ ೫ ರ ಸಮಯ ಹೆಚ್ಚು ಚುರುಕಲ್ಲದ ಬಿಸಿಲು ಮರಗಳ ಮದ್ಯದಲ್ಲಿ ಚೆಲ್ಲಾಟವಾಡುತ್ತ ಭೂಮಿಯನ್ನು ಚುಂಬಿಸುತ್ತಿತು. ನೋಡಲು ತುಂಬಾ ಮನೋಹರವಾಗಿತ್ತು. ಪತಿ ಮತ್ತು ಮಗಳು ಬರುವವರೆಗೆ ಕಾರಲ್ಲಿ ಕುಳಿತುಕೊಳ್ಳಲು ಬೇಸರವೆನಿಸಿ ಮರಗಳನ್ನು ನೋಡುತ್ತಾ ನಿಲ್ಲೋಣವೆಂದು ಆ ಜಾಗದ ಹತ್ತಿರ ಬಂದೆನು. ಆಗ "ಬನ್ನಿ" ಎಂದ ಹಾಗೆ ಕೇಳಿಸಿತು, ನನಗೆ ಹೇಳಿದ

ದೇವರ ನಾಡಿನಲ್ಲಿ ಹೀಗೊಂದು ಶಾಪಿಂಗ್

ನಾನು ನನ್ನ ಮಗಳು ಕೇರಳದಲ್ಲಿ ಬಟ್ಟೆ ಅಂಗಡಿಗೆ ಹೋಗಿದ್ದೆವು. ನಮಗೆ ಮಲಯಾಳಂ ಭಾಷೆ ಅಪರಿಚಿತವಾಗಿದ್ದರೂ ಶಾಪಿಂಗ್ ಮಾಡತೊಡಗಿದೆವು.ಹೇಗೊ ಕಷ್ಟ ಪಟ್ಟು ಅಂಗಡಿಯವರಿಗೆ ನಮಗೆ ಬೇಕಾದ ಬಟ್ಟೆಗಳ ಪರಿಚಯ ಮಾಡಿಸಿ ಕೊಂಡುಕೊಂಡೆವು. ನಂತರ ಬಿಲ್ ಮಾಡಿಸಲು ಬೇರೆ ಕೌಂಟರ್ ದುಡ್ಡು ಕೊಡಲು ಬೇರೆ ಕೌಂಟರ್ ಇತ್ತು.ಅದನ್ನು ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಮಗೆ ಮಲಯಾಳಂ ನಲ್ಲಿ ಹೇಳಿದ್ದಳು ಅವಳಿಗೆ ಮಲಯಾಳಂ ಹೊರತು ಪಡಿಸಿ ಬೇರೆ ಭಾಷೆಯ ಅರಿವಿರಲಿಲ್ಲ. ನಮಗೆ ಮಲಯಾಳಂ ಗೊತ್ತಿರಲಿಲ್ಲ. ಅವಳ ಮಾತು ನಮಗೆ ಹೊಸದು,ನಮ್ಮ ಮಾತು ಅವಳ ಅರಿವಿಗೆ ದೂರ. ನಮ್ಮ ನಡುವಿನ ಅರ್ಥವಾಗದ ಸಂಭಾಷಣೆ ಅಲ್ಲಿದ್ದ ಜನರಿಗೆ ತಮಾಷೆಯಾಗಿ ಕಂಡಿತ್ತು. ಇದು "ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ" ಎನ್ನುವ ಹಾಗಿತ್ತು. ನಂತರ ಆ ಯುವತಿ ತಾನೇ ನಮ್ಮ ಜೊತೆಗೆ ಬಂದು ಬಿಲ್ ಮಾಡಿಸಿ ದುಡ್ಡು ಕೊಡುವ ಕೌಂಟರ್ ತೋರಿಸಿದಳು. ಅವಳ ತಡವಾದ ಜ್ಞಾನೋದಯ (?) ಕ್ಕೆ ಅವಳಿಗೆ ದನ್ಯವಾದ ಹೇಳಿ ನಾನು ನನ್ನ ಮಗಳು ಪೇಚಿನ ಪ್ರಸಂಗವನ್ನು ನೆನೆಯುತ್ತ ನಗುತ್ತ ಅಂಗಡಿಯಿಂದ ಹೊರನಡೆದವು. 
ಭಾವನೆಗಳ ಸಿಂಚನ  ನನ್ನ ಮೊದಲ  ಕನ್ನಡ ಬ್ಲಾಗ್  "ಭಾವನಾ ಪ್ರಪಂಚ " ದಲ್ಲಿ ಎಲ್ಲ ರೀತಿಯ ಭಾವನೆಗಳ ಸಿಂಚನವಾಗಲಿದೆ. ಈ ಸಿಂಚನ ಓದುಗರ ಮೆಚ್ಚುಗೆಗೆ ಪಾತ್ರವಾಗಲಿ ಎಂಬುದೇ ನನ್ನ ಕನಸು. ಈ ಕನಸಿಗೆ ಸ್ಪೂರ್ತಿ ನೀಡಿ ಕೈ ಹಿಡಿದು ನಡೆಸಬೇಕಾಗಿ ಕೋರಿಕೆ .