ಕಮಂಗಿ

 ಕೇರಳದ ಪುಟ್ಟ ಊರಿನಲ್ಲಿ ಒಂದು ಮಲಯಾಳಿ ಕುಟುಂಬ ಗಂಡ ಹೆಂಡತಿ ಮತ್ತು ಮಗಳು. ಮಗಳ ವಯಸ್ಸು ೨೦ -೨೫ ರ ಆಸುಪಾಸು ಆದರೂ ಪ್ರಭುದ್ದತೆ ಇಲ್ಲದೆ ಬುದ್ದಿ ಮಾತ್ರ ಕಮಂಗಿತನದಿಂದ ಕೂಡಿತ್ತು. ಕಮಂಗಿ ಎಂದರೆ ಹುಚ್ಚು ಹುಚ್ಚಾಗಿ ಆಡುವ, ಮಾತನಾಡುವ ಮನುಷ್ಯ ರೂಪದಲ್ಲಿರುವ ಮಂಗಾ. ಬುದ್ದಿಯಲ್ಲಿ ಅಪ್ಪ ಅಮ್ಮನಿಗೆ ತಕ್ಕ ಮಗಳು. ಅವರ ವಂಶ ವೃಕ್ಷವೇ ಹಾಗಿತ್ತು ವಂಶ ಮಾತ್ರ ಬೆಳೆದು ಬುದ್ದಿ ಬಾಡಿ ಹೋಗಿತ್ತು. ಗಾಂಭೀರ್ಯ ಎನ್ನುವ ಪದ ಅವರಿಂದ ಬಲು ದೂರದಲ್ಲಿತ್ತು. ಯಾವುದಾದರೊಂದು ವಿಷಯದಲ್ಲಿ ನೆರೆ ಹೊರೆಯವರೊಡನೆ ಚರ್ಚೆ ಸಾಮಾನ್ಯವಾಗಿತ್ತು. ಹೀಗಿರಲು ಅಲ್ಲಿ ಬೇರೆ ಭಾಷೆಯ ಕುಟುಂಬ ನೆಲೆಸಲು ಬಂದಿತ್ತು. ಆ ಕಮಂಗಿಯ ಕುಟುಂಬಕ್ಕೆ ಆ ಭಾಷೆ ಹೊಸದು. ಹೊಸ ಕುಟುಂಬ ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರ  ಸೌಂದರ್ಯವನ್ನು  ಹೊಗಳಿ ಮಾತನಾಡುತ್ತ ಅಂಗಳದಲ್ಲಿ ನಿಂತಿದ್ದರು. ಕಾರಣವಿಲ್ಲದೆ ಎಲ್ಲರೊಡನೆ ಜಗಳವಾಡುವ ಕಮಂಗಿಗೆ ಅವರ ಮಾತು ಅರ್ಥವಾಗದೇ ತನ್ನನ್ನು ತನ್ನ  ಅಮ್ಮ ಅಪ್ಪನನ್ನು ಬೈಯ್ಯುತ್ತಿದ್ದಾರೆಂದು ಹೊಸ ಕುಟುಂಬದೊಡನೆ ಜಗಳವಾಡತೊಡಗಿದಳು ತನ್ನ ಅಮ್ಮ ನೊಡನೆ ಸೇರಿ. ಪರಿಚಯವೇ ಆಗದ ಹೊಸ ಕುಟುಂಬ ತಮಗೇಕೆ ಬೈಯ್ಯುತ್ತಾರೆಂಬ ಸಾಮಾನ್ಯ ಜ್ಞಾನವಿಲ್ಲದೆ ಪೆದ್ದುತನ ಪ್ರದರ್ಶಿಸಿದ್ದರು ಅಮ್ಮ ಮಗಳು. 

ಆ ಕುಟುಂಬದ ಭಾಷೆ ಅರಿತ ಕೆಲ ಜನರು ಕಮಂಗಿಯ ಹುಚ್ಚುತನಕ್ಕೆ ನಗತೊಡಗಿದರು. ಮತ್ತು ವಿವರಿಸಿ ಮಾತಿನ ಅರ್ಥ ಹೇಳಿದರು. ಆಗ ಕಮಂಗಿಯ ಮುಖ "ಇಂಗು ತಿಂದ ಮಂಗನಂತಾಗಿತ್ತು." ಅವಳ ಅಮ್ಮ ಮಗಳೊಟ್ಟಿಗೆ ಸೇರಿ "ಎಡಬಿಡಂಗಿ" ಆಗಿದ್ದಳು. ಸನ್ನಿವೇಶವನ್ನು ಅರಿತ ಕಮಂಗಿಯ ಅಪ್ಪ "ಕೋಡಂಗಿ" ಯಂತೆ ತಲೆ ತಗ್ಗಿಸಬೇಕಾಯಿತು. ಸುತ್ತ ಮುತ್ತಲಿನ ಜನರಿಗೆ ಕಮಂಗಿಯಿಂದ ಪುಕ್ಸಟ್ಟೆ ಮನರಂಜನೆ ದೊರೆತಂತಾಯ್ತು.  


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಲೇಶಿಯಾದ ಮರೆಯಲಾಗದ ಸವಿನೆನಪುಗಳು

ಬೆಂಗಳೂರಿನ ಬಸ್ಸಿನ ಪುರಾಣ

ಗೃಹಿಣಿ