ನನ್ನ ಮೊದಲ ಕನ್ನಡ ಬ್ಲಾಗ್ "ಭಾವನಾ ಪ್ರಪಂಚ " ದಲ್ಲಿ ಎಲ್ಲ ರೀತಿಯ ಭಾವನೆಗಳ ಸಿಂಚನವಾಗಲಿದೆ. ಈ ಸಿಂಚನ ಓದುಗರ ಮೆಚ್ಚುಗೆಗೆ ಪಾತ್ರವಾಗಲಿ ಎಂಬುದೇ ನನ್ನ ಕನಸು. ಈ ಕನಸಿಗೆ ಸ್ಪೂರ್ತಿ ನೀಡಿ ಕೈ ಹಿಡಿದು ನಡೆಸಬೇಕಾಗಿ ಕೋರಿಕೆ .
ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ ಬಸ್ ಪ್ರಯಾಣದಲ್ಲಿಯೇ ಕಳೆಯುತ್ತಾರೆ. ಯಾವಾಗಲೂ ಕಿಕ್ಕಿರಿದು ತುಂಬಿರುತ್ತದೆ. ಜನರ ಮದ್ಯೆ ನುಸುಳಲು ಗಾಳಿಗೂ ಸಹ ಹರಸಾಹಸ. ಗಾಳಿ ಸೇವಿಸಲು ಹೇಗೋ ಕಷ್ಟ ಪಟ್ಟು ಜಗಳವಾಡಿ ಗುಂಪಿನಿಂದ ಮೂಗು ಆಚೆ ಹಾಕುತ್ತಾರೆ. ಮದ್ಯಾಹ್ನದ ಸಮಯವಾದರೆ ಕಾಲೇಜು ಹುಡುಗ ಹುಡುಗಿಯರ ಗುಂಪು ಬಸ್ಸಿಗಾಗಿ ಕಾದಾಟ ನಡೆಸುತ್ತಿರುತ್ತಾರೆ. ಮೊದಲೇ ಪಾಠ ಕೇಳಿ ಸೋತು ಸುಣ್ಣವಾಗಿ ಹಸಿವಿನಿಂದ ಕಂಗಾಲಾಗುವ ಅವರನ್ನು ನೋಡಿದಾಗ ಬಸ್ ಕಂಡಕ್ಟರ್ ಡ್ರೈವರ್ ಗಳ ತಮಾಷೆ ಮೂಡ್ ಜೋರಾಗುತ್ತೆ. ಕಾಲೇಜು ಗುಂಪನ್ನು ಕಿಚಾಯಿಸಲು ಬೇಕೆಂದೇ ಬಸ್ಸನ್ನು ಅವರು ನಿಂತಿರುವ ಸ್ಥಳದಿಂದ (ಬಸ್ಸ ಸ್ಟಾಪ್ ಆದರೂ ) ಒಂದು ಫರ್ಲಾಂಗ್ ದೂರ ಹೋಗಿ ನಿಲ್ಲಿಸುತ್ತಾರೆ. ಹುಡುಗ ಹುಡುಗಿಯರು ಬಸ್ಸ ಹತ್ತಲು ಓಡತೊಡಗಿದರೆ ಕಂಡಕ್ಟರ್ ಡ್ರೈವರ್ ಕಿಟಕಿ ಬಾಗಿಲಿನಿಂದ ತಲೆ ಆಚೆ ಹಾಕಿ ಮುಗುಳ್ನಗೆ ಬೀರುತ್ತಾ ನೋಡುತ್ತಾರೆ ಹಸಿವಿನಲ್ಲೂ ಹುರುಪು ಉಳಿಸಿಕೊಂಡು ಜೋರಾಗಿ ಬಸ್ಸಿನೆಡೆಗೆ ಯಾರು ದೌಡಾಯಿಸುತ್ತಾರೆ ನೋಡಿ ಅವರಿಗೆ ಸನ್ಮಾನ ಮಾಡುವಂತೆ!!. ಮರುದಿನ ಕಾಲೇಜು ಗುಂಪು ಬಸ್ ಸ್ಟಾಪ್ಪ್ ನಲ್ಲಿ ನಿಲ್ಲದೆ ಮುಂದೆ ಹೋಗಿ ನಿಂತರೆ ಅಂದು ಬಸ್ ಸ್ಟಾಪ್ ನಲ್ಲೇ ನಿಲ್ಲುತ್ತೆ ಕಾಲೇಜು...
ನನ್ನ ಪತಿ ಮಲೇಷ್ಯಾದಲ್ಲಿ ೫ ವರ್ಷದ ಕಾಂಟ್ರಾಕ್ಟ್ ಕೆಲಸದಲ್ಲಿದ್ದರು. ಕುಟುಂಬಕ್ಕೂ ಅಲ್ಲಿ ಇರಲು ಎಲ್ಲ ರೀತಿಯ ಸೌಲಭ್ಯಗಳನ್ನು ಕಂಪನಿಯು ಒದಗಿಸಿತ್ತು. ಹೀಗಾಗಿ ಪತಿ ನನ್ನನ್ನು, ಅತ್ತೆಯನ್ನು ಮತ್ತು ಮಗಳನ್ನು ಅಲ್ಲಿಗೆ ನೆಲೆಸಲು ಕರೆದೊಯ್ದರು. ಮಲೇಷ್ಯಾ ತುಂಬಾ ಸುಂದರವಾದ, ಹೆಚ್ಚು ಜನಜಂಗುಳಿ ಇರದ ಕರಾವಳಿ ದೇಶ. ಅಲ್ಲಿ ಭಾರತ,ಇಂಡೋನೇಷಿಯಾ,ಚೀನಾ,ಬಾಂಗ್ಲಾ,ಥಾಯ್ಲ್ಯಾಂಡ್ ಹೀಗೆ ವಿವಿಧ ದೇಶದ ಜನರಿದ್ದಾರೆ. ಮಲೇಷ್ಯಾದ ಮೂಲನಿವಾಸಿಗಳಿಗೆ ಮಲೆಯು ಜನರು (ಮುಸ್ಲಿಂ ಜನಾಂಗ) ಎನ್ನುತ್ತಾರೆ. ಅವರಿಗೆ ಬಾಲಿವುಡ್ ಸಿನಿಮಾಗಳು ತುಂಬಾ ಇಷ್ಟ. ಹಿಂದಿ ಹಾಡುಗಳು ಅವರಿಗೆ ಆಪ್ತ ಅದರ ಜೊತೆಗೆ ತಮಿಳ್ ಸಿನಿಮಾಗಳು ತಮ್ಮ ವರ್ಚಸ್ಸನ್ನು ಬೀರಿವೆ. ಮಲೇಷ್ಯಾದ ನೆಲದ ಮೇಲೆ ಕಾಲಿಟ್ಟ ತಕ್ಷಣ ಆತ್ಮೀಯವೆನಿಸಿಬಿಡುತ್ತದೆ ಆ ದೇಶ. ಅಲ್ಲಿಯ ಸ್ಥಳಿಯ ಹಾಗೂ ವ್ಯಾವಹಾರಿಕ ಭಾಷೆ "ಮಲಯ್ ಅಥವಾ ಮಲ್ಹಾಯು ". ಈ ಭಾಷೆಗೆ ಸ್ವಂತ ಲಿಪಿ ಇಲ್ಲ ಇಂಗ್ಲಿಷ್ ಲಿಪಿ ಉಪಯೋಗಿಸಿ ಬರೆಯುತ್ತಾರೆ. ಕೆಲ ಅಕ್ಷರಗಳ ಉಚ್ಛಾರ ಬೇರೆ ತೆರನಾಗಿದೆ. ಆದ್ದರಿಂದ ಇಂಗ್ಲಿಷ್ನಲ್ಲಿ ಬರೆದ್ರೂ ಉಚ್ಛಾರ ಮತ್ತು ಅರ್ಥ ಗೊತ್ತಾಗಲ್ಲ. ಹೀಗಿರುವಾಗ ನಾವೆಲ್ಲರೂ ಶಾಪಿಂಗ್ ಹೊರಟೆವು.ತುಂಬಾ ಸುಸಜ್ಜಿತವಾದ ಮಾಲ್ ಗಳು ಅಂಗಡಿಗಳು ಇದ್ದವು. ಪ್ರತಿ ಮಾಲ್ ನಲ್ಲಿಯೂ ನಮಾಜ್ ಗಾಗಿ ಹೆಂಗಸರು ಮತ್ತು ಗಂಡಸರಿಗೆ ಪ್ರತ್ಯೇಕ ಪ್ರೇಯರ್ ರೂಮ್ ಕಡ್ಡಾಯವಾಗಿರುತ್ತದೆ. ರೆಸ್ಟ್ ರೂಮ್ ಗ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ