ಮಲೇಶಿಯಾದ ಮರೆಯಲಾಗದ ಸವಿನೆನಪುಗಳು

 ನನ್ನ ಪತಿ ಮಲೇಷ್ಯಾದಲ್ಲಿ ೫ ವರ್ಷದ ಕಾಂಟ್ರಾಕ್ಟ್ ಕೆಲಸದಲ್ಲಿದ್ದರು.  ಕುಟುಂಬಕ್ಕೂ ಅಲ್ಲಿ ಇರಲು ಎಲ್ಲ ರೀತಿಯ ಸೌಲಭ್ಯಗಳನ್ನು ಕಂಪನಿಯು ಒದಗಿಸಿತ್ತು. ಹೀಗಾಗಿ ಪತಿ ನನ್ನನ್ನು, ಅತ್ತೆಯನ್ನು ಮತ್ತು ಮಗಳನ್ನು ಅಲ್ಲಿಗೆ ನೆಲೆಸಲು ಕರೆದೊಯ್ದರು. ಮಲೇಷ್ಯಾ ತುಂಬಾ ಸುಂದರವಾದ, ಹೆಚ್ಚು ಜನಜಂಗುಳಿ ಇರದ ಕರಾವಳಿ ದೇಶ.

ಅಲ್ಲಿ ಭಾರತ,ಇಂಡೋನೇಷಿಯಾ,ಚೀನಾ,ಬಾಂಗ್ಲಾ,ಥಾಯ್ಲ್ಯಾಂಡ್ ಹೀಗೆ ವಿವಿಧ ದೇಶದ ಜನರಿದ್ದಾರೆ. ಮಲೇಷ್ಯಾದ ಮೂಲನಿವಾಸಿಗಳಿಗೆ ಮಲೆಯು ಜನರು (ಮುಸ್ಲಿಂ ಜನಾಂಗ) ಎನ್ನುತ್ತಾರೆ. ಅವರಿಗೆ ಬಾಲಿವುಡ್ ಸಿನಿಮಾಗಳು ತುಂಬಾ ಇಷ್ಟ. ಹಿಂದಿ ಹಾಡುಗಳು ಅವರಿಗೆ ಆಪ್ತ ಅದರ ಜೊತೆಗೆ ತಮಿಳ್ ಸಿನಿಮಾಗಳು ತಮ್ಮ ವರ್ಚಸ್ಸನ್ನು ಬೀರಿವೆ. ಮಲೇಷ್ಯಾದ ನೆಲದ ಮೇಲೆ ಕಾಲಿಟ್ಟ ತಕ್ಷಣ ಆತ್ಮೀಯವೆನಿಸಿಬಿಡುತ್ತದೆ ಆ ದೇಶ. ಅಲ್ಲಿಯ ಸ್ಥಳಿಯ ಹಾಗೂ ವ್ಯಾವಹಾರಿಕ ಭಾಷೆ "ಮಲಯ್ ಅಥವಾ ಮಲ್ಹಾಯು ". ಈ ಭಾಷೆಗೆ ಸ್ವಂತ ಲಿಪಿ ಇಲ್ಲ ಇಂಗ್ಲಿಷ್ ಲಿಪಿ ಉಪಯೋಗಿಸಿ ಬರೆಯುತ್ತಾರೆ. ಕೆಲ ಅಕ್ಷರಗಳ ಉಚ್ಛಾರ ಬೇರೆ ತೆರನಾಗಿದೆ. ಆದ್ದರಿಂದ ಇಂಗ್ಲಿಷ್ನಲ್ಲಿ ಬರೆದ್ರೂ ಉಚ್ಛಾರ ಮತ್ತು ಅರ್ಥ ಗೊತ್ತಾಗಲ್ಲ. ಹೀಗಿರುವಾಗ ನಾವೆಲ್ಲರೂ ಶಾಪಿಂಗ್ ಹೊರಟೆವು.ತುಂಬಾ ಸುಸಜ್ಜಿತವಾದ 

ಮಾಲ್ ಗಳು ಅಂಗಡಿಗಳು ಇದ್ದವು. ಪ್ರತಿ ಮಾಲ್ ನಲ್ಲಿಯೂ ನಮಾಜ್ ಗಾಗಿ ಹೆಂಗಸರು ಮತ್ತು ಗಂಡಸರಿಗೆ ಪ್ರತ್ಯೇಕ ಪ್ರೇಯರ್ ರೂಮ್  ಕಡ್ಡಾಯವಾಗಿರುತ್ತದೆ. ರೆಸ್ಟ್ ರೂಮ್ ಗಳು ಅಲ್ಲಲ್ಲಿ ಇರುತ್ತವೆ. ನನ್ನ ೪ ವರ್ಷದ ಮಗಳಿಗೆ ರೆಸ್ಟ್ ರೂಮ್ ಗೆ ಹೋಗಬೇಕಾಗಿ ಬಂತು. ಎಲ್ಲ ಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ಆದರೆ "ಮಲ್ಹಾಯು " ಭಾಷೆಯ ಅರ್ಥದಲ್ಲಿ ಬರೆದದ್ದರಿಂದ ನಮಗೆ ರೆಸ್ಟ್ ರೂಮ್ (ಹುಡುಗ ಮತ್ತು ಹುಡುಗಿಯ ಚಿತ್ರ ಇದ್ದರೂ )ಮತ್ತು ಪ್ರೇಯರ್ ರೂಮ್ ಬಗ್ಗೆ ಗೊಂದಲ ಉಂಟಾಗಿ ಪ್ರೇಯರ್ ರೂಮ್ ಗೆ ಹೋದೆವು ಫ್ರೆಷ್ ಆಗಲು 😁. ಅಲ್ಲಿ ಎಲ್ಲ ಮಹಿಳೆಯರು ನಮಾಜ್ ಮಾಡುತ್ತಿದ್ದರು ಅದನ್ನು ನೋಡಿದ ನಾವು ಕಕ್ಕಾಬಿಕ್ಕಿ. ಎಲ್ಲ ಮಹಿಳೆ ಮಕ್ಕಳು ಹೊರಗೆ ಚಪ್ಪಲಿ ಬಿಟ್ಟು ಕೋಣೆಯೊಳಕ್ಕೆ ಹೋಗುತ್ತಿದ್ದದ್ದನ್ನು ಗಮನಿಸಿಯೂ ಅರ್ಥ ಮಾಡಿಕೊಳ್ಳದೆ ಹೋಗಿದ್ದು ಪೇಚಿಗೆ ಸಿಲುಕಿಸಿತ್ತು ನನ್ನನ್ನು.ಈ ಅವಾಂತರವನ್ನು ನೆನೆದು ನನ್ನ ಪತಿ ಮತ್ತು ಮಗಳು ನಗುತ್ತಿದ್ದರು ಕೆಲದಿನಗಳವರೆಗೆ.... 




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಂಗಳೂರಿನ ಬಸ್ಸಿನ ಪುರಾಣ

ಗೃಹಿಣಿ