ದೇವರ ನಾಡಿನಲ್ಲಿ ಹೀಗೊಂದು ಶಾಪಿಂಗ್

ನಾನು ನನ್ನ ಮಗಳು ಕೇರಳದಲ್ಲಿ ಬಟ್ಟೆ ಅಂಗಡಿಗೆ ಹೋಗಿದ್ದೆವು. ನಮಗೆ ಮಲಯಾಳಂ ಭಾಷೆ ಅಪರಿಚಿತವಾಗಿದ್ದರೂ ಶಾಪಿಂಗ್ ಮಾಡತೊಡಗಿದೆವು.ಹೇಗೊ ಕಷ್ಟ ಪಟ್ಟು ಅಂಗಡಿಯವರಿಗೆ ನಮಗೆ ಬೇಕಾದ ಬಟ್ಟೆಗಳ ಪರಿಚಯ ಮಾಡಿಸಿ ಕೊಂಡುಕೊಂಡೆವು. ನಂತರ ಬಿಲ್ ಮಾಡಿಸಲು ಬೇರೆ ಕೌಂಟರ್ ದುಡ್ಡು ಕೊಡಲು ಬೇರೆ ಕೌಂಟರ್ ಇತ್ತು.ಅದನ್ನು ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಮಗೆ ಮಲಯಾಳಂ ನಲ್ಲಿ ಹೇಳಿದ್ದಳು ಅವಳಿಗೆ ಮಲಯಾಳಂ ಹೊರತು ಪಡಿಸಿ ಬೇರೆ ಭಾಷೆಯ ಅರಿವಿರಲಿಲ್ಲ. ನಮಗೆ ಮಲಯಾಳಂ ಗೊತ್ತಿರಲಿಲ್ಲ. ಅವಳ ಮಾತು ನಮಗೆ ಹೊಸದು,ನಮ್ಮ ಮಾತು ಅವಳ ಅರಿವಿಗೆ ದೂರ. ನಮ್ಮ ನಡುವಿನ ಅರ್ಥವಾಗದ ಸಂಭಾಷಣೆ ಅಲ್ಲಿದ್ದ ಜನರಿಗೆ ತಮಾಷೆಯಾಗಿ ಕಂಡಿತ್ತು. ಇದು "ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ"
ಎನ್ನುವ ಹಾಗಿತ್ತು. ನಂತರ ಆ ಯುವತಿ ತಾನೇ ನಮ್ಮ ಜೊತೆಗೆ ಬಂದು ಬಿಲ್ ಮಾಡಿಸಿ ದುಡ್ಡು ಕೊಡುವ ಕೌಂಟರ್ ತೋರಿಸಿದಳು. ಅವಳ ತಡವಾದ ಜ್ಞಾನೋದಯ (?) ಕ್ಕೆ ಅವಳಿಗೆ ದನ್ಯವಾದ ಹೇಳಿ ನಾನು ನನ್ನ ಮಗಳು ಪೇಚಿನ ಪ್ರಸಂಗವನ್ನು ನೆನೆಯುತ್ತ ನಗುತ್ತ ಅಂಗಡಿಯಿಂದ ಹೊರನಡೆದವು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಲೇಶಿಯಾದ ಮರೆಯಲಾಗದ ಸವಿನೆನಪುಗಳು

ಬೆಂಗಳೂರಿನ ಬಸ್ಸಿನ ಪುರಾಣ

ಗೃಹಿಣಿ