ಬೆಂಗಳೂರಿನ ಬಸ್ಸಿನ ಪುರಾಣ
ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ ಬಸ್ ಪ್ರಯಾಣದಲ್ಲಿಯೇ ಕಳೆಯುತ್ತಾರೆ. ಯಾವಾಗಲೂ ಕಿಕ್ಕಿರಿದು ತುಂಬಿರುತ್ತದೆ. ಜನರ ಮದ್ಯೆ ನುಸುಳಲು ಗಾಳಿಗೂ ಸಹ ಹರಸಾಹಸ. ಗಾಳಿ ಸೇವಿಸಲು ಹೇಗೋ ಕಷ್ಟ ಪಟ್ಟು ಜಗಳವಾಡಿ ಗುಂಪಿನಿಂದ ಮೂಗು ಆಚೆ ಹಾಕುತ್ತಾರೆ. ಮದ್ಯಾಹ್ನದ ಸಮಯವಾದರೆ ಕಾಲೇಜು ಹುಡುಗ ಹುಡುಗಿಯರ ಗುಂಪು ಬಸ್ಸಿಗಾಗಿ ಕಾದಾಟ ನಡೆಸುತ್ತಿರುತ್ತಾರೆ. ಮೊದಲೇ ಪಾಠ ಕೇಳಿ ಸೋತು ಸುಣ್ಣವಾಗಿ ಹಸಿವಿನಿಂದ ಕಂಗಾಲಾಗುವ ಅವರನ್ನು ನೋಡಿದಾಗ ಬಸ್ ಕಂಡಕ್ಟರ್ ಡ್ರೈವರ್ ಗಳ ತಮಾಷೆ ಮೂಡ್ ಜೋರಾಗುತ್ತೆ. ಕಾಲೇಜು ಗುಂಪನ್ನು ಕಿಚಾಯಿಸಲು ಬೇಕೆಂದೇ ಬಸ್ಸನ್ನು ಅವರು ನಿಂತಿರುವ ಸ್ಥಳದಿಂದ (ಬಸ್ಸ ಸ್ಟಾಪ್ ಆದರೂ ) ಒಂದು ಫರ್ಲಾಂಗ್ ದೂರ ಹೋಗಿ ನಿಲ್ಲಿಸುತ್ತಾರೆ. ಹುಡುಗ ಹುಡುಗಿಯರು ಬಸ್ಸ ಹತ್ತಲು ಓಡತೊಡಗಿದರೆ ಕಂಡಕ್ಟರ್ ಡ್ರೈವರ್ ಕಿಟಕಿ ಬಾಗಿಲಿನಿಂದ ತಲೆ ಆಚೆ ಹಾಕಿ ಮುಗುಳ್ನಗೆ ಬೀರುತ್ತಾ ನೋಡುತ್ತಾರೆ ಹಸಿವಿನಲ್ಲೂ ಹುರುಪು ಉಳಿಸಿಕೊಂಡು ಜೋರಾಗಿ ಬಸ್ಸಿನೆಡೆಗೆ ಯಾರು ದೌಡಾಯಿಸುತ್ತಾರೆ ನೋಡಿ ಅವರಿಗೆ ಸನ್ಮಾನ ಮಾಡುವಂತೆ!!. ಮರುದಿನ ಕಾಲೇಜು ಗುಂಪು ಬಸ್ ಸ್ಟಾಪ್ಪ್ ನಲ್ಲಿ ನಿಲ್ಲದೆ ಮುಂದೆ ಹೋಗಿ ನಿಂತರೆ ಅಂದು ಬಸ್ ಸ್ಟಾಪ್ ನಲ್ಲೇ ನಿಲ್ಲುತ್ತೆ ಕಾಲೇಜು...